ಮೀಥೇನ್
ಕಾರ್ಬನ್ ಮತ್ತು ಹೈಡ್ರೊಜನ್ನುಗಳ ಸಂಯುಕ್ತವಸ್ತುಗಳಾದ ಪ್ಯಾರಾಫಿನ್ ಹೈಡ್ರೊಕಾರ್ಬನ್ನುಗಳ ಸಾಮ್ಯಸರಣಿ ಗುಂಪಿನ (ಹೊಮೊಲಾಗಸ್ ಸೀರೀಸ್) ಮೊದಲನೆಯ ರಾಸಾಯನಿಕ (ಅಊ4). ಜವುಗುನೆಲದಲ್ಲಿ ಬುದ್ಬುದಿಸುವ ಅನಿಲದ ಪ್ರಧಾನ ಘಟಕ. ಇದು ಪೆಟ್ರೋಲಿಯಮ್ ಗಣಿಗಳಲ್ಲಿ ಪೆಟ್ರೋಲಿಯಮ್ ಎಣ್ಣೆ ಜೊತೆ ಬೆರೆತಿರುವುದು. ಎಣ್ಣೆಯೊಂದಿಗೆ ಬರುವ ನೈಸರ್ಗಿಕಾನಿಲಗಳಲ್ಲಿ ಇದೇ ಮುಖ್ಯವಾದುದು-ಶೇಕಡಾ 85ರಷ್ಟು. ಎಂದೇ ಇದನ್ನು ಒತ್ತಡ ತಡೆಯುವ ಸಿಲಿಂಡರುಗಳಲ್ಲಿ ಒತ್ತಡದಲ್ಲಿಟ್ಟು ಅಡುಗೆ ಇಂಧನವಾಗಿ ಬಳಸಲು ಸಂಬರಾಜು ಮಾಡುವುದಾಗಿದೆ. ರೆಂಬೆ, ಕಾಂಡ ಮುಂತಾದ ಸಸ್ಯಸಂಬಂಧ ವಸ್ತುಗಳು ನೀರಿನಲ್ಲಿ ನಿರಾಮ್ಲಜನಕ ಪರಿಸ್ಥಿತಿಯಲ್ಲಿದ್ದಾಗ ವಿಶೇಷ ಜೀವಾಣುಗಳ ಕಾರಣವಾಗಿ ಈ ಅನಿಲ ತಯಾರಾಗುತ್ತದೆ. ಈ ರೀತಿಯ ಪರಿಸ್ಥಿತಿಯಿರುವ ಜವುಗು ಪ್ರದೇಶದಲ್ಲಿ ಇದು ಬಿಡುಗಡೆಯಾಗುವುದರಿಂದ ಇದನ್ನು ಜವುಗು ಅನಿಲ (ಮಾರ್ಷ್‍ಗ್ಯಾಸ್) ಎಂದೂ ಕರೆಯುತ್ತಾರೆ. ಸಗಣಿ ಅಥವಾ ಗ್ರಾಮಸಾರವನು ಇದೇ ರೀತಿ ನಿರಾಮ್ಲಜನಕ ಸ್ಥಿತಿಯಲ್ಲಿ ಕೊಳೆಸುವುದರಿಂದ ತಯಾರಾಗಿ ಬರುವ ಗೊಬ್ಬರ ಅನಿಲ ಅಥವಾ ಗ್ರಾಮಸಾರ ಅನಿಲದಲ್ಲಿಯೂ ಮೀಥೇನ್ ಮುಖ್ಯವಾದುದು. ಸೀಮೆ ಎಣ್ಣೆಯನ್ನು ಕ್ರ್ಯಾಕಿಂಗ್ ಕ್ರಿಯೆಗೆ (ನಿರಾಮ್ಲಜನಕ ಮತ್ತು ಅತಿ ಉಷ್ಣತೆಯಲ್ಲಿ ಆಗುವ ಅಣುಛೇದನಕ್ರಿಯೆ) ಒಳಪಡಿಸಿ ತಯಾರಿಸಿದ ಅಡುಗೆ ಇಂಧನದಲ್ಲಿಯೂ ಕೋಲ್ ಅನಿಲ, ಕೋಕ್ ಓವನ್ ಅನಿಲ, ಪೆಟ್ರೋಲಿಯಮ್ ಸಂಸ್ಕರಣ ಅನಿಲಗಳಲ್ಲಿಯೂ ಮೀಥೇನಿನ ಪ್ರಮಾಣ ಹೆಚ್ಚು.

	ಇದನ್ನು ಪ್ರಯೋಗಾಲಯದಲ್ಲೂ ತಯಾರುಮಾಡುವ ಮಾರ್ಗಗಳಿವೆ. ಸೋಡಿಯಮ್ ಅಸಿಟೇಟನ್ನು ಸೋಡಿಯಮ್ ಹೈಡ್ರಾಕ್ಸೈಡಿನೊಂದಿಗೆ ಕಾಸುವುದು ಒಂದು ಮಾರ್ಗ. ಮೀಥೈಲ್ ಮೆಗ್ನಿಸಿಯಮ್ ಅಯೋಡೈಡಿನ (ಗ್ರೀನ್ಯಾರ್ಡ್ ರಾಸಾಯನಿಕ) ಈಥರ್ ದ್ರಾವಕದೊಂದಿಗೆ ಅದರಷ್ಟೆ ನೀರನ್ನು ನಿಧಾನವಾಗಿ ಹಾಕುವುದರಿಂದ ಮೀಥೇನ್ ಬಿಡುಗಡೆ ಆಗುತ್ತದೆ. ಇದು ತಯಾರಿಕೆಯ ಇನ್ನೊಂದು ಮಾರ್ಗ.

	ಮೀಥೇನಿನ ದ್ರವನಬಿಂದು -182.60ಅ ಮತ್ತು ಕ್ವಥನಬಿಂದು 161.70ಅ. ಈ ಅನಿಲ ವಾಯುವಿಗಿಂತ ಹಗುರ. ಇದರ ಸಾಂದ್ರತೆ 0.554. ಇದು ನೀರಿನಲ್ಲಿ ವಿಲೀನವಾಗುವುದಿಲ್ಲ. ಆದರೆ ಈಥೈಲ್ ಆಲ್ಕೊಹಾಲ್ ಮತ್ತು ಈಥರ್ ಮುಂತಾದ ದ್ರಾವಣಗಳಲ್ಲಿ ವಿಲೀನವಾಗುತ್ತದೆ.

	ಮೀಥೇನ್ ಸುಲಭವಾಗಿ ರಾಸಾಯನಿಕ ಬದಲಾವಣೆ ಹೊಂದುವುದಿಲ್ಲ. ಇದು ಆಕ್ಸಿಜನ್ನಿನೊಂದಿಗೆ ಹೊತ್ತಿಕೊಂಡು ಉರಿದು ನೀರು ಮತ್ತು ಇಂಗಾಲ ಡೈ ಆಕ್ಸೈಡನ್ನು ಬಿಡುಗಡೆ ಮಾಡುತ್ತದೆ. ಇದರ ಜ್ವಾಲೆಯಲ್ಲಿ ಶಾಖ ಹೆಚ್ಚು. ಎಂದೇ ಇಂಧನಾನಿಲವಾಗಿ ಇದರ ಮುಖ್ಯ ಉಪಯೋಗ. ಇದು ವಾಯುವಿನೊಂದಿಗೆ ಸೇರಿಕೊಂಡು ಸ್ಛೋಟಕಮಿಶ್ರಣವಾಗಬಲ್ಲುದು. ಶೇಕಡಾ ಸುಮಾರು 5.3ರಿಂದ 13.9ರಷ್ಟು ಮೀಥೇನ್ ಇರುವ ವಾಯುವೇ ಕಲ್ಲಿದ್ದಲಿನ ಗಣಿಗಳಲ್ಲಿ ಆಗುವ ಸ್ಛೋಟಗಳಿಗೆ ಕಾರಣ.

	ಮೀಥೇನ್ ಅತಿದೃಢ ರಾಸಾಯನಿಕ. ಇದರ ಅಣುವನ್ನು ಒಡೆಯಲು 10000ಅ ಉಷ್ಣತೆ ಬೇಕು. ಆಗ ಒಡೆದು ಇಂಗಾಲ ಬಿಡುಗಡೆಯಾಗುವುದು. ಈ ಗುಣ ಉಪಯೋಗಿಸಿಕೊಂಡು ಹತ್ತಿಯ ರೂಪದ ಇಂಗಾಲ (ಕಾರ್ಬನ್ ಬ್ಲ್ಯಾಕ್) ತಯಾರಿಸುತ್ತಾರೆ. ಇದನ್ನು ಟಯರ್ ತಯಾರಿಕೆಯಲ್ಲಿ ಟಯರಿಗೆ ಗಡಸುತನ ಬರಿಸಲು ಮತ್ತು ಅದರ ಸವೆತ ಕಡಿಮೆ ಮಾಡಿ ಬಾಳಿಕೆ ಹೆಚ್ಚಿಸಲು ಬಳಸುತ್ತಾರೆ.

	ಮೀಥೇನಿನ ಅಣುವಿನಲ್ಲಿ ಕಾರ್ಬನ್ನಿನ ಮೇಲನ್ಸಿ ಪೂರ್ಣವಾಗಿ ತೃಪ್ತಿಯಾಗಿರುವುದರಿಂದ ಇದು ಆದೇಶ ರಾಸಾಯನಿಕಕ್ರಿಯೆಗಳಿಗೆ ಮಾತ್ರ ಒಳಗಾಗುತ್ತದೆ. ಮೀಥೇನನ್ನು ಕ್ಲೋರೀನಿನೊಂದಿಗೆ ಬೆರೆಸಿ ಕತ್ತಲೆಯಲ್ಲಿ ಇಟ್ಟಿದ್ದರೆ ಯಾವ ರಸ ಬದಲಾವಣೆ ಆಗುವುದಿಲ್ಲವಾದರೂ ಸೂರ್ಯನ ಬೆಳಕಿನಲ್ಲಿ ಅವರಡೂ ವೇಗವಾಗಿ ರಾಸಾಯನಿಕಕ್ರಿಯೆ ಹೊಂದಿ ಮೀಥೇನಿನಲ್ಲಿಯ ನಾಲ್ಕು ಹೈಡ್ರೊಜನ್ ಪರಮಾಣುಗಳು ಒಂದೊಂದಾಗಿ ಹೋಗಿ ಅವುಗಳ ಬದಲು ಕ್ಲೋರೀನಿನ ಪರಮಾಣುಗಳು ಅನುಕ್ರಮವಾಗಿ ಬಂದು ಮೀಥೈಲ್ ಕ್ಲೋರೈಡ್, ಮಿಥಿಲೀನ್ ಕ್ಲೋರೈಡ್, ಕ್ಲೋರೊಫಾರಮ್ ಮತ್ತು ಕಾರ್ಬನ್ ಟೆಟ್ರಕ್ಲೋರೈಡುಗಳ ಈ ರೀತಿಯ ತಯಾರಿಕೆ ಕೈಗಾರಿಕಾ ಮಟ್ಟದಲ್ಲಿಯೂ ಸಾಧ್ಯ. ಇದೇ ರೀತಿಯಲ್ಲಿ ಮೀಥೇನ್ ಮತ್ತು ನೈಟ್ರಿಕ್ ಆಮ್ಲ 2:1 ರ ಪ್ರಮಾಣದಲ್ಲಿ 4750ಅ ಉಷ್ಣತೆಯಲ್ಲಿ ಅನಿಲಪರಿಸ್ಥಿತಿಯಲ್ಲಿ ಸೇರಿ ನೈಟ್ರೊಮಿ ಥೇನ್ ತಯಾರಾಗುವುದು. ಮೀಥೇನನ್ನು ವಿದ್ಯುತ್‍ಚಾಪಕ್ಕೆ ಒಳಪಡಿಸಿ ಕೈಗಾರಿಕಾವಸ್ತುವಾದ ಅಸಿಟಲೀನನ್ನು ತಯಾರಿಸಬಹುದು. ಇವಲ್ಲದೆ ಮೀಥೇನಿನ ಜನ್ಯವಸ್ತುಗಳಿಗೆ ಹಚ್ಚುವ ವಾರ್ನಿಷ್ ಬಣ್ಣಗಳಿಗೆ ದ್ರಾವಕವಾದ ಮೀಥೈಲ್ ಆಲ್ಕೋಹಾಲ್, ಫಾರ್ಮಾಲ್ಡಿ ಹೈಡ್, ಪ್ಲಾಸ್ಟಿಕ್ ಕೈಗಾರಿಕೆಯ ಪ್ರಾರಂಭದ ವಸ್ತುವಾದ ಹೈಡ್ರೊಜನ್ ಸಯನೈಡ್ ಮುಂತಾದವು ಉದಾಹರಣೆಗಳು. 800-10000ಅ ಉಷ್ಣತೆಯಲ್ಲಿ ಮೀಥೇನನ್ನು ನೀರಿನ ಆವಿಯೊಂದಿಗೆ ರಾಸಾಯನಕ್ರಿಯೆ ಹೊಂದುವಂತೆ ಮಾಡಿದಾಗ ಹೈಡ್ರೊಜನ್ ಮತ್ತು ಕಾರ್ಬನ್ ಮಾನಾಕ್ಸೈಡ್ ಅನಂತರ ಕಾರ್ಬನ್ ಡೈಆಕ್ಸೆಡ್ ಮತ್ತು ಹೆಚ್ಚು ಹೈಡ್ರೊಜನ್ ಬಿಡುಗಡೆ ಆಗುವುವು. ಹೈಡ್ರೊಜನನ್ನು ಅಮೋನಿಯ ತಯಾರಿಕೆಗೆ ಬಳಸಿಕೊಳ್ಳಬಹುದು.
(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ